"ಸಹವಾಸದಿಂದ ಸನ್ಯಾಸಿಯೇ ಕೆಡುವುದಾದರೆ ನಾವು ನೀವು ಯಾವ ಲೆಕ್ಕ"
ಸಾ ಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಮಕ್ಕಳು(children) ಶಾಲೆಗೆ ಸೇರಿದಾಗ ಪೋಷಕರು ತಮ್ಮ ಮಕ್ಕಳಿಗೆ ನೀಡುವ ಮೊದಲ ಎಚ್ಚರಿಕೆಯ ಪಾಠವೆಂದರೆ “ಯಾರ ಜೊತೆಯಾದರು ಸ್ನೇಹ ಮಾಡುವುದಾದರೆ ನೋಡಿ ಮಾಡಿ ಸ್ನೇಹಮಾಡು” ಎಂಬುದು. ಈ ಎಚ್ಚರಿಕೆಯ ಸಂದೇಶ ಇಂದು ನೆನ್ನೆಯದಲ್ಲ ಇದು ಶತ-ಶತಮಾನಗಳಿಂದಲೂ ರೂಢಿಯಲ್ಲಿದೆ. ನಾವು ಮಾಡುವ ಸ್ನೇಹ(friendship), ಸಹವಾಸಗಳು ನಮ್ಮ ಉನ್ನತಿ ಹಾಗೆಯೇ ನಮ್ಮ ಅವನತಿ ಎರಡಕ್ಕೂ ಸಹ ದಾರಿ ಮಾಡಿಕೊಡಬಲ್ಲದು. ಇಷ್ಟೆಲ್ಲಾ ಪೀಠಿಕೆ ಹಾಕಲು ಮುಖ್ಯ ಕಾರಣ ಇತ್ತೀಚೆಗೆ ನಾನು ಓದಿದ್ದ ಕಾಲೇಜಿನಲ್ಲಿ(college) ನಡೆದ ಆ ಒಂದು ಘಟನೆ. ಅದನ್ನು ಇಂದಿಗೂ ನನ್ನ ಕೈಲಿ ಅರಗಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಯಾವುದೋ ಕೆಲಸದ ಮೇಲೆ ನಮ್ಮ ಪತ್ರಿಕೋದ್ಯಮ ವಿಭಾಗದ(Journalism department) ಕಡೆ ಹೋಗಿದ್ದೆ. ಅದೇ ದಿನ ನಾನು ಪದವಿ ಓದಿದ್ದ ಕಾಲೇಜಿನಲ್ಲಿ ಯಾವುದೋ ಒಂದು ಕಾರ್ಯಕ್ರಮ ಆಯೋಜಿಸಿದ್ದರು. ಕಾಲೇಜು, ವಿಭಾಗ ಎರಡು ಒಂದೇ ಕ್ಯಾಂಪಸ್‌ನಲ್ಲಿ(college campuses) ಇರುವುದರಿಂದ ಕುತೂಹಲಕ್ಕೆ ಏನಿರಬಹುದು ಎಂದು ನೋಡಲು ನನ್ನ ಜೂನಿಯರ್ ಜೊತೆ ಹೋದೆ. ಆದರೆ ಅಲ್ಲಿ ಕಿವಿ ಕಿತ್ತೋಗುವ ಹಾಗೆ ಡಿಜೆ(DJ) ಹಾಕಲಾಗಿತ್ತು, ಹುಡುಗ ಹುಡುಗಿಯರೆಲ್ಲರೂ ಮೈಮರೆತು ಕುಣಿಯುತ್ತಿದ್ದರು. ಅದು ಎಲ್ಲಾ ಕಾಲೇಜುಗಳಲ್ಲಿಯು ನಡೆಯುವುದೆ, ಅದರಲ್ಲೇನು ವಿಶೇಷ ಎಂದು ನಿಮಗನ್ನಿಸಬಹುದು. ಅಸಲಿಗೆ ಅಲ್ಲಿ ಕುಣಿಯುತ್ತಿದ್ದ(Dance) ಒಂದಷ್ಟು ವಿದ್ಯಾ