ಸಾ ಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಮನಸ್ಸೊಂದಿದ್ದರೆ ಮಾರ್ಗವು ಉಂಟು ಕೆಚ್ಚೆದೆ ಇರಬೇಕೆಂದೆಂದು ಎಂಬ ಅಣ್ಣಾವ್ರ ಸಿನಿಮಾ ಸಾಕ್ಷಾತ್ಕಾರದಲ್ಲಿ ಬಳಸಿರುವ ಹಾಡು ಮನುಷ್ಯ ಮನಸ್ಸಿನ ಶಕ್ತಿಯನ್ನು ತಿಳಿಸುತ್ತದೆ. 'ಮನೋಬಲ ಮಹಾಬಲ' ಅಂದರೆ ಮನಸ್ಸು ಇಡೀ ಜಗತ್ತಿನಲ್ಲಿಯೇ ಅತ್ಯಂತ ಪ್ರಬಲವಾದ ಹಾಗೆಯೇ ಶಕ್ತಿಯುತವಾದ ಆಯುಧವಾಗಿದೆ. ಮನುಷ್ಯ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಲ್ಲ. ಇದಕ್ಕೆ ಅನ್ವರ್ಥವಾಗುವಂತೆ 16 ವರ್ಷದ ಶೀತಲ್ ದೇವಿ ಏಷ್ಯನ್ ಪ್ಯಾರಾ ಗೇಮ್ಸ್ 2023 ರಲ್ಲಿ ಎರಡು ಚಿನ್ನ ಸೇರಿದಂತೆ ಮೂರು ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಹುಟ್ಟಿನಿಂದಲೇ ಫೋಕೊಮೆಲಿಯಾ ಎಂಬ ಕಾಯಿಲೆಯಿಂದ ಬಳಲುತ್ತಿರುವ ಶೀತಲ್ ದೇವಿಗೆ ಎರಡೂ ಕೈಗಳಿಲ್ಲ! ಕಾಶ್ಮೀರದ ಕುವರಿ ಶೀತಲ್ : ಶೀತಲ್ ದೇವಿಯವರು ಮೂಲತಃ ಕಾಶ್ಮೀರದವರು. ಜನವರಿ 10, 2007 ರಂದು ಜಮ್ಮು ಮತ್ತು ಕಾಶ್ಮೀರದ ಕಿಶ್ಚಾರ್ ಜಿಲ್ಲೆಯ ಲೋಯಿ ಧಾರ್ ಎಂಬ ಹಳ್ಳಿಯಲ್ಲಿ ಬಡ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಕೃಷಿಕರಾಗಿದ್ದು ಮತ್ತು ಅವರ ತಾಯಿ ಮನೆಯಲ್ಲಿ ಮೇಕೆಗಳನ್ನು ಸಾಕುತ್ತಾರೆ. ಬಡ ಕುಟುಂಬದಲ್ಲಿ ಜನಿಸಿದ ಈಕೆಗೆ ಹುಟ್ಟಿನಿಂದಲೇ ಫೋಕೊಮೆಲಿಯಾ ಎಂಬ ಕಾಯಿಲೆ ಇದ್ದಿದ್ದರಿಂದ ಹುಟ್ಟಿನಿಂದಲೇ ಎರಡೂ ಕೈಗಳನ್ನು ಕಳೆದುಕೊಳ್ಳಬೇಕಾಗಿ ಬರುತ್ತದೆ. ಶೀತಲ್ ಬಿಲ್ಲು ವಿದ್ಯೆ ಕಲಿತದ್ದು ಆಕಸ್ಮಿಕ ಶೀತ...
ಸಾ ಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಮಕ್ಕಳು(children) ಶಾಲೆಗೆ ಸೇರಿದಾಗ ಪೋಷಕರು ತಮ್ಮ ಮಕ್ಕಳಿಗೆ ನೀಡುವ ಮೊದಲ ಎಚ್ಚರಿಕೆಯ ಪಾಠವೆಂದರೆ “ಯಾರ ಜೊತೆಯಾದರು ಸ್ನೇಹ ಮಾಡುವುದಾದರೆ ನೋಡಿ ಮಾಡಿ ಸ್ನೇಹಮಾಡು” ಎಂಬುದು. ಈ ಎಚ್ಚರಿಕೆಯ ಸಂದೇಶ ಇಂದು ನೆನ್ನೆಯದಲ್ಲ ಇದು ಶತ-ಶತಮಾನಗಳಿಂದಲೂ ರೂಢಿಯಲ್ಲಿದೆ. ನಾವು ಮಾಡುವ ಸ್ನೇಹ(friendship), ಸಹವಾಸಗಳು ನಮ್ಮ ಉನ್ನತಿ ಹಾಗೆಯೇ ನಮ್ಮ ಅವನತಿ ಎರಡಕ್ಕೂ ಸಹ ದಾರಿ ಮಾಡಿಕೊಡಬಲ್ಲದು. ಇಷ್ಟೆಲ್ಲಾ ಪೀಠಿಕೆ ಹಾಕಲು ಮುಖ್ಯ ಕಾರಣ ಇತ್ತೀಚೆಗೆ ನಾನು ಓದಿದ್ದ ಕಾಲೇಜಿನಲ್ಲಿ(college) ನಡೆದ ಆ ಒಂದು ಘಟನೆ. ಅದನ್ನು ಇಂದಿಗೂ ನನ್ನ ಕೈಲಿ ಅರಗಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಯಾವುದೋ ಕೆಲಸದ ಮೇಲೆ ನಮ್ಮ ಪತ್ರಿಕೋದ್ಯಮ ವಿಭಾಗದ(Journalism department) ಕಡೆ ಹೋಗಿದ್ದೆ. ಅದೇ ದಿನ ನಾನು ಪದವಿ ಓದಿದ್ದ ಕಾಲೇಜಿನಲ್ಲಿ ಯಾವುದೋ ಒಂದು ಕಾರ್ಯಕ್ರಮ ಆಯೋಜಿಸಿದ್ದರು. ಕಾಲೇಜು, ವಿಭಾಗ ಎರಡು ಒಂದೇ ಕ್ಯಾಂಪಸ್ನಲ್ಲಿ(college campuses) ಇರುವುದರಿಂದ ಕುತೂಹಲಕ್ಕೆ ಏನಿರಬಹುದು ಎಂದು ನೋಡಲು ನನ್ನ ಜೂನಿಯರ್ ಜೊತೆ ಹೋದೆ. ಆದರೆ ಅಲ್ಲಿ ಕಿವಿ ಕಿತ್ತೋಗುವ ಹಾಗೆ ಡಿಜೆ(DJ) ಹಾಕಲಾಗಿತ್ತು, ಹುಡುಗ ಹುಡುಗಿಯರೆಲ್ಲರೂ ಮೈಮರೆತು ಕುಣಿಯುತ್ತಿದ್ದರು. ಅದು ಎಲ್ಲಾ ಕಾಲೇಜುಗಳಲ್ಲಿಯು ನಡೆಯುವುದೆ, ಅದರಲ್ಲೇನು ವಿಶೇಷ ಎಂದು ನಿಮಗನ್ನಿಸಬಹುದು. ಅಸಲಿಗೆ ಅಲ್ಲಿ ಕುಣಿಯುತ್ತಿದ್ದ(Dance) ಒಂದಷ್...
Comments
Post a Comment