ಸಂತೋಷ್ ಕುಮಾರ್ SIR ಇನ್ನು ಆಗ ತಾನೆ ಪ್ರಥಮ ವರ್ಷದ ಎಂಎ ಮುಗಿದು ದ್ವಿತೀಯ ವರ್ಷಕ್ಕೆ ಪದಾರ್ಪಣೆ ಮಾಡಿದೆವು. ತರಗತಿಗಳು ಆರಂಭವಾಗಿ ಕೆಲವು ದಿನ ಕಳೆದಿದ್ದವು. ಅಷ್ಟರಲ್ಲಿ ಒಂದು ಮೆಮೋ ನಮ್ಮನ್ನು ಹುಡುಕಿಕೊಂಡು ಬಂತು. ಅದೇನೆಂದರೆ ಮೂರನೇ ಸೆಮಿಸ್ಟರ್ ನಲ್ಲಿ ಒಇಪಿ ಆಯ್ಕೆ ಮಾಡಿಕೊಳ್ಳಬೇಕಿತ್ತು. ಹೋದ ಸೆಮ್‌ನಲ್ಲಿ ಎಂಎಸ್‌ಡಬ್ಲ್ಯೂ ಒಇಪಿ ತೆಗೆದುಕೊಂಡಿದ್ದೆ. ಅದು ಚೆನ್ನಾಗಿಯೇ ಇತ್ತು ಆದರೆ ಅನುಷಾ ಮೇಡಂ ಅದೇ ಸಮಯದಲ್ಲಿ ಅವರ ವೈಯಕ್ತಿಕ ಕಾರಣಕ್ಕಾಗಿ ರಜೆಯಲ್ಲಿದ್ದರು. ಆದರೆ ಈ ಬಾರಿ ಸಮಾಜ ಶಾಸ್ತ್ರ ಆಯ್ಕೆ ಮಾಡೋಣ ಎಂದು ಆಲೋಚಿಸುತ್ತಿದ್ದೆ, ಆದರೆ ಈ ವಿಷಯ ಆಯ್ಕೆಗೂ ಮೊದಲೂ ಎಂಎಸ್ ಡಬ್ಲ್ಯೂವನ್ನೇ ಆಯ್ಕೆಮಾಡೋಣ ಎಂದು ತೀರ್ಮಾನಿಸಿದ್ದೆ. ಆದರೆ ನನ್ನ ಸ್ನೇಹಿತರೆಲ್ಲ ಅವರು ಯಾರೋ ಲೆಚ್ಚರ್ ಸರಿ ಇಲ್ಲ ಮಾರಾಯ ಯಾವಾಗಲು ಗುರ್ ಅಂತಿರ್ತಾರಂತೆ, ಸ್ವಾಮಿ ನೋಡೋಕೆ ಒಳ್ಳೆ ರೌಡಿ ತರ ಕಾಣಾರೆ ಬೇಡ ಕಣೋ ಅಂತೆಲ್ಲಾ ಎದುರಿಸಿ ಬಿಟ್ಟಿದ್ದರು. ಆ ಭಯಕ್ಕೆ ನಾನು ಅತ್ತ ಕಡೆ ತಲೆಹಾಕಿ ಕೂಡ ಮಲಗಬಾರದು ಅಂದುಕೊಂಡೆ, ಆದರೆ ಒಂದು ದಿನ ಆಗಿದ್ದಾಗಲಿ ಎಂಎಸ್ ಡಬ್ಲ್ಯು ಕ್ಲಾಸ್ ಅದು ಹೇಗೆ ಮಾಡ್ತಾರೋ ನೋಡಿಕೊಂಡು ಬರೋಣ ಅಂತ ಹೊರಟೆ, ಕ್ಲಾಸ್ ಆರಂಭವಾಗಿತ್ತು, ಅಷ್ಟರಲ್ಲಾಗಲೇ ಹೋದ ಸೆಮಿಸ್ಟರ್ ನಲ್ಲಿ ಎಮ್ ಎಸ್ಟಬ್ಲ್ಯೂ ಒಇಪಿ ಆಯ್ಕೆ ಮಾಡಿದ್ದ ಸೈಕಾಲಜಿ, ಇಂಗ್ಲಿಷ್, ರಾಜ್ಯಶಾಸ್ತ್ರ ವಿಭಾಗದ ಸ್ನೇಹಿತರೆಲ್ಲಾ ಹೊರಗೆ ನಿಂತು ಒಳ ಹೋಗಲು ಅವರ ಪರ್ಮಿಶನ್ಗ...