ಮನಸ್ಸೊಂದಿದ್ದರೆ ಮಾರ್ಗವು ಉಂಟು ಕೆಚ್ಚೆದೆ ಇರಬೇಕೆಂದೆಂದು
ಸಾ ಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಮನಸ್ಸೊಂದಿದ್ದರೆ ಮಾರ್ಗವು ಉಂಟು ಕೆಚ್ಚೆದೆ ಇರಬೇಕೆಂದೆಂದು ಎಂಬ ಅಣ್ಣಾವ್ರ ಸಿನಿಮಾ ಸಾಕ್ಷಾತ್ಕಾರದಲ್ಲಿ ಬಳಸಿರುವ ಹಾಡು ಮನುಷ್ಯ ಮನಸ್ಸಿನ ಶಕ್ತಿಯನ್ನು ತಿಳಿಸುತ್ತದೆ. 'ಮನೋಬಲ ಮಹಾಬಲ' ಅಂದರೆ ಮನಸ್ಸು ಇಡೀ ಜಗತ್ತಿನಲ್ಲಿಯೇ ಅತ್ಯಂತ ಪ್ರಬಲವಾದ ಹಾಗೆಯೇ ಶಕ್ತಿಯುತವಾದ ಆಯುಧವಾಗಿದೆ. ಮನುಷ್ಯ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಲ್ಲ. ಇದಕ್ಕೆ ಅನ್ವರ್ಥವಾಗುವಂತೆ 16 ವರ್ಷದ ಶೀತಲ್ ದೇವಿ ಏಷ್ಯನ್ ಪ್ಯಾರಾ ಗೇಮ್ಸ್ 2023 ರಲ್ಲಿ ಎರಡು ಚಿನ್ನ ಸೇರಿದಂತೆ ಮೂರು ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಹುಟ್ಟಿನಿಂದಲೇ ಫೋಕೊಮೆಲಿಯಾ ಎಂಬ ಕಾಯಿಲೆಯಿಂದ ಬಳಲುತ್ತಿರುವ ಶೀತಲ್ ದೇವಿಗೆ ಎರಡೂ ಕೈಗಳಿಲ್ಲ! ಕಾಶ್ಮೀರದ ಕುವರಿ ಶೀತಲ್ : ಶೀತಲ್ ದೇವಿಯವರು ಮೂಲತಃ ಕಾಶ್ಮೀರದವರು. ಜನವರಿ 10, 2007 ರಂದು ಜಮ್ಮು ಮತ್ತು ಕಾಶ್ಮೀರದ ಕಿಶ್ಚಾರ್ ಜಿಲ್ಲೆಯ ಲೋಯಿ ಧಾರ್ ಎಂಬ ಹಳ್ಳಿಯಲ್ಲಿ ಬಡ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಕೃಷಿಕರಾಗಿದ್ದು ಮತ್ತು ಅವರ ತಾಯಿ ಮನೆಯಲ್ಲಿ ಮೇಕೆಗಳನ್ನು ಸಾಕುತ್ತಾರೆ. ಬಡ ಕುಟುಂಬದಲ್ಲಿ ಜನಿಸಿದ ಈಕೆಗೆ ಹುಟ್ಟಿನಿಂದಲೇ ಫೋಕೊಮೆಲಿಯಾ ಎಂಬ ಕಾಯಿಲೆ ಇದ್ದಿದ್ದರಿಂದ ಹುಟ್ಟಿನಿಂದಲೇ ಎರಡೂ ಕೈಗಳನ್ನು ಕಳೆದುಕೊಳ್ಳಬೇಕಾಗಿ ಬರುತ್ತದೆ. ಶೀತಲ್ ಬಿಲ್ಲು ವಿದ್ಯೆ ಕಲಿತದ್ದು ಆಕಸ್ಮಿಕ ಶೀತ...
Comments
Post a Comment